2015-08-24

ಶಾಸಕ ಎ. ವೆಂಕಟೇಶ್ ನಾಯಕ್ ಅವರ ನಿಧನಕ್ಕೆ ಮುಖ್ಯಮಂತ್ರಿ ಶೋಕ

ಬೆಂಗಳೂರು, ಆಗಸ್ಟ್ 24 ( ಕರ್ನಾಟಕ ವಾರ್ತೆ ): ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಪೆನುಗೊಂಡ ಬಳಿಯ ಮಡಕಶಿರಾದಲ್ಲಿ ಸೋಮವಾರ ನಸುಕಿನಲ್ಲಿ ಸಂಭವಿಸಿದ ಬೆಂಗಳೂರು-ನಾಂದೇಡ್ ಎಕ್ಸ್‍ಪ್ರೆಸ್ ರೈಲು ಅಪಘಾತದಲ್ಲಿ ದೇವದುರ್ಗದ ಶಾಸಕ ಶ್ರೀ ಎ. ವೆಂಕಟೇಶ್ ನಾಯಕ್ ಅವರು ನಿಧನರಾಗಿರುವುದಕ್ಕೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಅಂದಿನ ಮಂಡಲ ಪಂಚಾಯಿತಿ, ಜಿಲ್ಲಾ ಪರಿಷತ್ ನಂತಹ ತೃಣ ಮೂಲದ ರಾಜಕಾರಣದಲ್ಲಿ ಸಾರ್ವಜನಿಕ ಬದುಕನ್ನು ಪ್ರವೇಶಿಸಿದ ಶ್ರೀ ಅರಕೇರಾ ವೆಂಕಟೇಶ್ ನಾಯಕ್ ಅವರು 1991, 1998, 1999 ಹಾಗೂ 2004 ರಲ್ಲಿ ನಾಲ್ಕು ಬಾರಿ ರಾಯಚೂರು ಕ್ಷೇತ್ರದಿಂದ ಲೋಕ ಸಭೆಗೆ ಆಯ್ಕೆಯಾಗಿ ಸಂಸತ್ತು ಪ್ರವೇಶಿಸಿದ್ದು, ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಅಲ್ಲದೆ, 2013 ರಲ್ಲಿ ದೇವದುರ್ಗ ಕ್ಷೇತ್ರದಿಂದ ರಾಜ್ಯ ವಿಧಾನ ಸಭೆಗೂ ಪ್ರವೇಶಿಸಿ, ಆ ಭಾಗದಲ್ಲಿ ತಮ್ಮ ನಾಯಕತ್ವದಲ್ಲಿ ಪ್ರಭುತ್ವವನ್ನು ಕಾಯ್ದುಕೊಂಡಿದ್ದರು.

ಮಹದಾಯಿ ಜಲ ವಿವಾದ ಕುರಿತಂತೆ ಭಾನುವಾರ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರ್ವ ಪಕ್ಷಗಳ ಸಭೆಗೆ ತಡವಾಗಿ ಆಗಮಿಸಿದ ಶ್ರೀ ವೆಂಕಟೇಶ್ ನಾಯಕ್ ಅವರು ಇಷ್ಟು ಬೇಗ ನಮ್ಮನ್ನಗಲಿ ತೆರಳುತ್ತಾರೆ ಎಂದು ಊಹಿಸಿರಲಿಲ್ಲ !

ಸದಾ ಕೆಲಸ ಮುಗಿದೊಡನೆ ಮನೆಗೆ ತೆರಳುವ ಪರಿಪಾಠ ಹೊಂದಿದ್ದ ಶ್ರೀ ವೆಂಕಟೇಶ್ ನಾಯಕ್ ಅವರು ತಮ್ಮ ಹುಟ್ಟೂರು ಅರಕೇರಾದಲ್ಲಿನ ಸ್ವ-ಗೃಹದಲ್ಲೇ ವಾಸಿಸುತ್ತಿದ್ದರು. ಮೃದು ಮಾತಿಗೆ ಹೆಸರಾಗಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶದ ಅತ್ಯಂತ ಹಿರಿಯ ರಾಜಕಾರಣಿ ಎನಿಸಿದ್ದ ಅಜಾತ ಶತ್ರು ಶ್ರೀ ವೆಂಕಟೇಶ್ ನಾಯಕ್ ಅವರ ಹಠಾತ್ ನಿಧನವು ನನ್ನಲ್ಲಿ ಅತೀವ ನೋವನ್ನು ಉಂಟು ಮಾಡಿದೆ ಎಂದು ಶ್ರೀ ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಶ್ರೀ ವೆಂಕಟೇಶ್ ನಾಯಕ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಶ್ರೀ ವೆಂಕಟೇಶ್ ನಾಯಕ್ ಅವರ ಅಗಲಿಕೆಯಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಮುಖ್ಯಮಂತ್ರಿ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

ಶೃಂಗೇರಿಗೆ ಇಂಧನ ಸಚಿವರ ಭೇಟಿ

ಬೆಂಗಳೂರು, ಆಗಸ್ಟ್ 24, (ಕರ್ನಾಟಕ ವಾರ್ತೆ): ಇಂಧನ ಸಚಿವ ಶ್ರೀ ಡಿ.ಕೆ. ಶಿವಕುಮಾರ್ ಅವರು ಇಂದು ಶೃಂಗೇರಿ ಸಮೀಪದ ಕಿಗ್ಗಾದಲ್ಲಿರುವ ಋಷ್ಯ ಶೃಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು.

ಸಚಿವರ ಭೇಟಿಯ ಅಂಗವಾಗಿ ದೇವಾಲಯದಲ್ಲಿ ನಡೆದಿದ್ದ ಪ್ರರ್ಜನ್ಯ ಜಪ ಹಾಗೂ ಶತರುದ್ರಾಭಿಷೇಕ ಅಂತ್ಯದ ವೇಳೆಗೆ ದೇಗುಲಕ್ಕೆ ಆಗಮಿಸಿದ ಸಚಿವರು ಕೈಂಕರ್ಯದಲ್ಲಿ ಪಾಲ್ಗೊಂಡರು .

ಇದಕ್ಕೆ ಮೊದಲು ಸಚಿವರು ಶೃಂಗೇರಿ ಶಾರದ ಪೀಠದ ಹಿರಿಯ ಧರ್ಮ ಗುರುಗಳಾದ ಶ್ರೀಶ್ರೀಶ್ರೀ ಅಭಿನವ ಭಾರತಿ ಮಹಾಸ್ವಾಮಿಜೀಯವರನ್ನು ಭೇಟಿ ಮಾಡಿ ಆರ್ಶೀವಾದ ಪಡೆದರು. ಶೃಂಗೇರಿ ಕ್ಷೇತ್ರದ ಶಾಸಕ ಶ್ರೀ ಪಿ.ಎನ್. ಜೀವರಾಜ್, ಕಾಂಗ್ರೇಸ್ ಮುಖಂಡರಾದ ಡಾ|| ಟಿ.ಡಿ ರಾಜೇಗೌಡ ಹಾಗೂ ಶ್ರೀ ಸಚಿನ್ ಮಿಗಾ ಮತ್ತು ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.





ದೇವದುರ್ಗ ಕ್ಷೇತ್ರದ ಶಾಸಕ ಶ್ರೀ ವೆಂಕಟೇಶ್ ನಾಯಕ್ ನಿಧನಕ್ಕೆ ಸಚಿವೆ ಉಮಾಶ್ರೀ ಶೋಕ

ಬೆಂಗಳೂರು, ಆಗಸ್ಟ್ 24, ಮಾಜಿ ಸಂಸದ ಹಾಗೂ ಪ್ರಸ್ತುತ ದೇವದುರ್ಗ ಕ್ಷೇತ್ರದ ಶಾಸಕರಾದ ಶ್ರೀ ವೆಂಕಟೇಶ್ ನಾಯಕ್ ರವರ ನಿಧನಕ್ಕೆ ಸಚಿವೆ ಉಮಾಶ್ರೀ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯತಿ ಹಂತದಿಂದ ಸಾರ್ವಜನಿಕ ಜೀವನವನ್ನು ಆರಂಭಿಸಿದ ವೆಂಕಟೇಶ್ ನಾಯಕ್ ಮುಂದೆ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ, ಶಾಸಕರಾಗಿ ಬೆಳೆದು ಬಂದವರು. ರಾಯಚೂರು ಭಾಗದಲ್ಲಿ ಕಾಂಗ್ರೆಸ್‍ನ ಪ್ರಾಬಲ್ಯಕ್ಕೆ ವೆಂಕಟೇಶ್ ನಾಯಕ್ ಕಾರಣರಾಗಿದ್ದವರು. ಅವರ ನಿಧನದಿಂದ ಪಕ್ಷಕ್ಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಶಾಲೆಗಳ ನೋಂದಣಿಗಾಗಿ ಅರ್ಜಿ ಆಹ್ವಾನ

ಬೆಂಗಳೂರು, ಆಗಸ್ಟ್ 24 (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಶ್ವತ ಅನುದಾನ ರಹಿತವಾಗಿ 2015-16 ನೇ ಸಾಲಿನಿಂದ ಹೊಸ ಸಂಗೀತ, ನೃತ್ಯ, ನಾಟಕ ಶಾಲೆಗಳ ನೋಂದಣಿಗಾಗಿ ಅರ್ಹ ನೋಂದಾಯಿತ ಸಂಸ್ಥಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೈಸೂರು, ಬೆಂಗಳೂಋಉ ಹಾಗೂ ಬೆಳಗಾಂ ವಿಭಾಗದ ಅರ್ಹ ನೋಂದಾಯಿತ ಸಂಸ್ಥೆಗಳು ಆಯಾ ವಿಭಾಗದ ಸಹ ನಿರ್ದೇಶಕರು, ಸಾವ್ಜನಿಕ ಶಿಕ್ಷಣ ಇಲಾಖೆ, ಇವರಿಗೆ ಹಾಗೂ ಗುಲ್ಬರ್ಗಾ ವಿಭಾಗದ ಅರ್ಹ ನೋಂದಾಯಿತ ಸಂಸ್ಥೆಗಳು ಆಯುಕ್ತಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಗುಲ್ಬರ್ಗಾ, ಇವರಿಗೆ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸಲು ಅಕ್ಟೋಬರ್ 1 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.schooleducation.com ಅನ್ನು ಸಂಪರ್ಕಿಸಬಹುದಾಗಿದೆ.

ಪ್ರವಾಸ

ಬೆಂಗಳೂರು, ಆಗಸ್ಟ್ 24 (ಕರ್ನಾಟಕ ವಾರ್ತೆ): ಭಾರತೀಯ ಪತ್ರಿಕಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಶ್ರೀ ಚಂದ್ರಮೌಳಿಕುಮಾರ್ ಪ್ರಸಾದ್ ಅವರು ಸೆಪ್ಟೆಂಬರ್ 11 ರಿಂದ 14 ರವರೆಗೆ ಬೆಂಗಳೂರಿಗೆ ಭೇಟಿ ನೀಡುವರು.

JAWAHAR NAVODAYA VIDAYALAYA ENTERANCE EXAMINATION

Bengaluru Aug 24th (Karnataka Information): The Jawahar Navodaya Vidayalaya 2016 for admission to class VI for the academic year 2016-17 in Jawahar Navodaya Vidyalayas scheduled tobe held on Saturday 9th January 2016 at 11.30 am to 1.30 pm. The students who are studying in Class V for the academic year 2015-16 in Bangalore Urban District are eligible to appear for Examination.

The applications are available at all the Block Education Office of the Bangalore Urban District and this Vidyalaya. The Application can also be downloaded from the NVS website www.navodayahyd.go.in & this vidyalaya website www.invbangaloreurban.com. The last date for submission of Application form for JNV Selection Test, 2016 at Block Education Office only where the candidate is studying in Class V in 30th September 2015.

ಜವಹಾರ ನವೋದಯ ಶಾಲೆ ಪ್ರವೇಶ ಪರೀಕ್ಷೆ

ಬೆಂಗಳೂರು, ಆಗಸ್ಟ್ 24 (ಕರ್ನಾಟಕ ವಾರ್ತೆ): ಜವಾಹರ ನವೋದಯ ವಿದ್ಯಾಲಯವು 2016-17 ನೇ ಸಾಲಿನ 6ನೇ ತರಗತಿಯ ದಾಖಲಾತಿಗಾಗಿ ಪ್ರವೇಶ ಪರೀಕ್ಷೆಯನ್ನು ದಿನಾಂಕ: 09-01-2016 ರ ಶನಿವಾರ ಬೆಂಗಳೂರಿನ ಆಯ್ದ ಕೇಂದ್ರಗಳಲ್ಲಿ ನಡೆಸಲಾಗುವುದು. ಈ ಪ್ರವೇಶ ಪರೀಕ್ಷೆಗೆ ಮಾನ್ಯತೆ ಪಡೆದ ಶಾಲೆಯಲ್ಲಿ 2015-16 ನೇ ಸಾಲಿನಲ್ಲಿ 5ನೇ ತರಗತಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಓದುತ್ತಿರುವ ಮಕ್ಕಳು ಅರ್ಹರಾಗಿರುತ್ತಾರೆ. ವಿವರಣಾ ಪತ್ರ ಮತ್ತು ಅರ್ಜಿಗಳು ಉಚಿತವಾಗಿ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ, ನಮ್ಮ ವಿದ್ಯಾಲಯದಲ್ಲಿ ಹಾಗೂ ನವೋದಯ ಸಮಿತಿಯ ವೆಬ್‍ಸೈಟ್ www.navodayahyd.gov.in ಮತ್ತು ನಮ್ಮ ವಿದ್ಯಾಲಯದ ವೆಬ್‍ಸೈಟ್ www.vbangaloreurban.in ನಿಂದ ಪಡೆದುಕೊಳ್ಳಬಹುದು. ಭರ್ತಿಮಾಡಿದ ಅರ್ಜಿಯನ್ನು ಆಯಾ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲು ಕೊನೆಯ ದಿನಾಂಕ 30-09-20158.

ಜಿಲ್ಲಾ, ತಾಲ್ಲೂಕು ಮಟ್ಟದ ರೈತ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು, ಆಗಸ್ಟ್ 24 (ಕರ್ನಾಟಕ ವಾರ್ತೆ): ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಆಸಕ್ತ ರೈತ ಹಾಗೂ ರೈತ ಮಹಿಳೆಯರಿಂದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ, ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ. ಈ ಪ್ರಶಸ್ತಿಗಳನ್ನು ವಿಶ್ವವಿದ್ಯಾನಿಲಯವು, ನವೆಂಬರ್ ತಿಂಗಳಲ್ಲಿ ಆಯೋಜಿಸಲಿರುವ ಕೃಷಿಮೇಳ-2015 ರ ಸಂದರ್ಭದಲ್ಲಿ ನೀಡಲಾಗುವುದು. ನಿಗದಿತ ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಗಳ ಜಂಟಿ ಕೃಷಿ ನಿರ್ದೇಶಕರವರ ಕಚೇರಿ, ಜಿಲ್ಲಾ ತೋಟಗಾರಿಕಾ ಅಧಿಕಾರಿಗಳ ಕಚೇರಿ, ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ , ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ವಿಸ್ತರಣಾ ಶಿಕ್ಷಣ ಘಟಕಗಳಲ್ಲಿ ದೊರೆಯುತ್ತದೆ. ಅಲ್ಲದೇ ಅರ್ಜಿ ನಮೂನೆಯ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲೂwww.navodayahyd.gov.in ಲಭ್ಯವಿರುತ್ತದೆ.

ಭರ್ತಿಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 30-09-2015 ಆಗಿರುತ್ತದೆ. ಹೆಚ್ಚಿನ ವಿವರಗಳಿಗೆ ವಿಸ್ತರಣಾ ನಿರ್ದೇಶಕರ ಕಚೇರಿ, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು – 560 024 ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 080 – 23418883.

ಮೈಸೂರಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಚಲನಚಿತ್ರ ರಸಗ್ರಹಣ ಶಿಬಿರ

ಬೆಂಗಳೂರು, ಆಗಸ್ಟ್ 24 (ಕರ್ನಾಟಕ ವಾರ್ತೆ): ಪೂನಾದ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಭಂಡಾರದ ಸಹಯೋಗದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಸೆಪ್ಟೆಂಬರ್ 21 ರಿಂದ 28 ರವರೆಗೆ ಮೈಸೂರಿನಲ್ಲಿ ಒಂದು ವಾರದ ಚಲನಚಿತ್ರ ರಸಗ್ರಹಣ ಶಿಬಿರ ಏರ್ಪಡಿಸುತ್ತಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀ ಹೆಚ್.ಬಿ. ದಿನೇಶ್ ಅವರು ತಿಳಿಸಿದ್ದಾರೆ.

ಈ ಕಾರ್ಯಾಗಾರದಲ್ಲಿ 60 ಮಂದಿ ಆಸಕ್ತರಿಗೆ ಭಾಗವಹಿಸಲು ಅವಕಾಶವಿದ್ದು, ರೂ. 6,000/- (ಆರು ಸಾವಿರ ಮಾತ್ರ) ಕೋರ್ಸ್ ಶುಲ್ಕ ನಿಗದಿಪಡಿಸಲಾಗಿದೆ. ಕಾರ್ಯಾಗಾರವನ್ನು ಸಂಪೂರ್ಣವಾಗಿ ಪೂನಾದ ರಾಷ್ಟ್ರೀಯ ಚಲನಚಿತ್ರ ಭಂಡಾರವೇ ವಿನ್ಯಾಸಗೊಳಿಸಿದ್ದು, ಸಂಪನ್ಮೂಲ ವ್ಯಕ್ತಿಗಳು ಹಾಗೂ ತಾಂತ್ರಿಕ ಸಹಕಾರವನ್ನು ಅಕಾಡೆಮಿ ನೀಡಲಿದೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ 2015 ರ ಸೆಪ್ಟೆಂಬರ್ 5 ಆಗಿದ್ದು ಅರ್ಜಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಚಲನಚತ್ರ ಅಕಾಡೆಮಿ, ಬಾದಾಮಿ ಹೌಸ್, ನರಸಿಂಹರಾಜ ಸ್ಕೇರ್, ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಎದುರು, ಬೆಂಗಳೂರು-2 ಇವರಿಗೆ ತಲುಪಿಸಬೇಕು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಂತರ್ಜಾಲ http://www.kcainfo.comವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಂತರ್ಜಾಲ http://www.karnatakavarthe.org ಯಿಂದ ಅರ್ಜಿಗಳನ್ನು ಡೌನಲೋಡ್ ಮಾಡಿಕೊಳ್ಳಬಹುದು. ಅಕಾಡೆಮಿ ಕಚೇರಿಯಿಂದ, ಉಪ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧನ್ವಂತ್ರಿ ರಸ್ತೆ, ಮೈಸೂರು ಕಚೇರಿಯಿಂದ ಹಾಗೂ ಮೈಸೂರು ಫಿಲ್ಮ್ ಸೊಸೈಟಿಯಿಂದ ಅರ್ಜಿಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸುವವರು 18 ವರ್ಷ ಮೇಲ್ಪಟ್ಟು ಇರಬೇಕು ಹಾಗೂ ಸಿನಿಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರಬೇಕು. ಅರ್ಜಿಯ ಜೊತೆ ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಹೆಸರಿನಲ್ಲಿ ಪಡೆದ ರೂ. 6,000/- ಡಿ.ಡಿ. ಯನ್ನು ಲಗತ್ಸಿಸಬೇಕು. ಸಿನಿಮಾ ಇತಿಹಾಸ, ಸಂವಹನ ಹಾಗೂ ಕಲಾ ಮಾಧ್ಯಮವಾಗಿ ಸಿನಿಮಾ ಅಧ್ಯಯನ, ಸಿನಿಮಾದ ವಿವಿಧ ಆಯಾಯಮಗಳು, ಭಾರತೀಯ ಹಾಗೂ ವಿಶ್ವ ಸಿನಿಮಾದ ಅತ್ಯುತ್ತಮ ಚಿತ್ರಗಳ ವಿಶ್ಲೇಷಣಾತ್ಮಕ ಅಧ್ಯಯನ ಡಿಜಿಟಲ್ ತಂತ್ರಜ್ಞಾನ ಹಾಗೂ ಡಿಜಿಟಲ್ ಸಿನಿಮಾ ತಯಾರಿಕೆ ವಿಧಾನಗಳನ್ನು ಕಾರ್ಯಾಗಾರ ಒಳಗೊಂಡಿರುತ್ತದೆ. ದೇಶದ ಹೆಸರಾಂತ ಸಿನಿಮಾ ತಂತ್ರಜ್ಞರು, ನಿರ್ದೇಶಕರು, ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.

Karnataka Chalana Chitra Academy organizing Film Appreciation Course at Mysuru

Bangalore, August 24 (Karnataka Information): Karnataka Chalana Chitra Academy in association with the National Film Archive of India, Pune will be holding a weeklong Film Appreciation Course from 21st to 28th September, 2015 at Mysuru says Sri H.B. Dinesh, Registrar Karnataka Chalana Chitra Academy.

The course is open for the people above 18 years age who are interested in film studies. The curriculum includes theoretical study of the art and history of cinema, development of cinema as a medium of art and communication and various other aspects of the medium. Classics from both Indian and International cinema will be used for critical analysis and study. The course also includes advent of digital technology and the process of digital filmmaking

The course will be conducted from 9.30 AM to 7.30 PM. The medium of instruction will be English. Course fee is : Rs. 6000/- which includes lunch & snacks/tea/coffee. Arrangements are being made to provide accommodation at concessional rates for the outstation participants. Since we have only limited seats interested persons are requested to contact us at the earliest convenience. The curriculum of the course is designed by the NFAI, the premier institution who are conducting this course for over four decades now. The faculty will include eminent filmmakers, film technicians, film critics and historians who are well experienced in this field.

Application in the prescribed form to be sent along with the course fee {DD} Rs. 6000/- should reach the Karnataka Chalana Chitra Academy , Badami House, NR Square , Bangalore – 560002. to reach us before 5th September 2015. The prescribed application forms can be obtained from the KCA Bangalore, , and also from the Information Department Mysore, and Mysore Film Society, Mysore. Application form can also be obtained through email: chalanachitraacademy @gmail.com. Further details can be obtained from :Karnataka Chalanachitra Academy, Badami House , OPP. BBMP, NR Square, Bengaluru -560002

Phone : 080- 22133410. E-mail – chalanachitraacademy@gmail.com.

ಸಂತಾಪ

ಬೆಂಗಳೂರು, ಆಗಸ್ಟ್ 24 (ಕರ್ನಾಟಕ ವಾರ್ತೆ): ಮಾಜಿ ಸಂಸದ ಹಾಗೂ ಹಾಲಿ ದೇವದುರ್ಗದ ಶಾಸಕ ವೆಂಕಟೇಶ ನಾಯಕರವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿ ಅಧ್ಯಕ್ಷ ಶ್ರೀ ವಿ.ಎಸ್. ಉಗ್ರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Show more